Wednesday, November 7, 2012

ಜೀವನೋತ್ಸವ

ಅದೆಲ್ಲೋ ಕಳೆದು ಹೋದ ದಿನಗಳ
ಅರಸುತ್ತ ಹೊರಟೆ ನಾ
ಕುವೆಂಪು ಹೆಣೆದ ಪ್ರಕೃತಿಯ ಚಿತ್ತಾರ
ಗರಿಗೆದರಿತು ಕಣ್ಮುಂದೆ

ಮೊಗದ ಪ್ರತಿಬಿಂಬ ಕೊಳದಲಿ
ತಣ್ಣನೆ ಗಾಳಿಯು ಬೀಸಲು
ಅಲೆಯಲಿ ಕಳೆದುಹೋದ ಚಂದ್ರನ
ಕೆಣಕಲು ಮನಸು ನಿರ್ಮಲ

ಕಡಲದಡಿಯಲಿ ಹೆಜ್ಜೆಯ ಗುರುತುಗಳ
ರಮಿಸಲು ನಿಯೋಜಿತ ಕಾರಂತರ ಅಲೆಗಳು
ಪ್ರತಿಯೊಂದು ಪದಗಳು ಚಂದಗಾಣಲು
ನನ್ನೊಳಗಿನ ಮುತ್ತು ಚಿಪ್ಪೊಳಗೆ

ಗಗನಚುಂಬಿ ಕನಸುಗಳ ತೆಂಗು ಮರಗಳು
ಭೋರ್ಗರೆವ ಕನ್ನಡ ಕಂಪಿನ ಹಿಮ್ಮೇಳ
ಮತ್ತೆ ಹುಟ್ಟಿ ಬರುವ ನನ್ನಯ ಕವನ
ಜೀವನೋತ್ಸವ ಅದುವೇ ರಾಜ್ಯೋತ್ಸವ

This is a poem (written in Kannada) that won me the 2nd Prize, in the Poetry competition held as part of Karnataka Rajyotsava Celebration at SAP.